ಅಂಡಮಾನ್ ನಿಕೋಬಾರ್ ಪ್ರವಾಸ ಕಥೆ


ಅಂಡಮಾನ್ ನಿಕೋಬಾರ್


ಬಂಗಾಳ ಕೊಲ್ಲಿಯಲ್ಲಿರುವ ಈ ಕುದುರುಗಡಲು ಅಥವಾ ದ್ವೀಪಸಮುದಾಯದಲ್ಲಿ ಅಂಡಮಾನ್ ನಿಕೋಬಾರ್

ದ್ವೀಪಗಳು ಅತಿ ದೊಡ್ಡವು.

 306 ದ್ವೀಪಗಳು ಹಾಗೂ 206 ದಡಿಬಂಡೆಗಳನ್ನು ಹೊಂದಿದ್ದು 8200 sq km ವಿಸ್ತರಿಸಿದೆ.

ಕೇವಲ 38 ದ್ವೀಪಗಳಲ್ಲಿ ಮಾತ್ರ ಜನರಿದ್ದಾರೆ. ಭಾರತದ ಮುಖ್ಯ ಭೂಮಿಯಿಂದ 1200 ಕಿ ಮೀ ದೂರವಿದೆ. ಆದರೆ ಈ ದ್ವೀಪಸಮುದಾಯದ ಉತ್ತರದಲ್ಲಿರುವ "ಲ್ಯಾಂಡ್ ಫಾಲ್"  ದ್ವೀಪದಿಂದ ಮೈನಮಾರ್ (ಬರ್ಮ ) 280 ಕಿ. ಮೀ. ಹತ್ತಿರ. ಅಲ್ಲದೆ ಈ ದ್ವೀಪಸಮುದಾಯದ   ದಕ್ಷಿಣದ "ಗ್ರೇಟ್ ನಿಕೋಬಾರ್"  ದ್ವೀಪದಿಂದ ಬರೀ 145 ಕಿ. ಮೀ. ಅಷ್ಟೇ. ಅಂಡಮಾನ್ ನಿಕೋಬಾರ ದ್ವೀಪಗಳು ಬರ್ಮ ದ "ಕೇಪ್ ನೆಗ್ರಿಸ್" ನಿಂದ ಸುಮಾತ್ರ (ಇಂಡೋನೇಷ್ಯ) ದ "ಬಂಡ ಆರ್ಚ್" ವರೆಗೆ ಬಿದಿಗೆ ಚಂದ್ರನಂತೆ  ಹಬ್ಬಿರುವ  ಸಮೂಹ ದ್ವೀಪ. ಇವು ಬರ್ಮದ ಮುಳುಗಿರುವ "ಅರ್ಕನ್ ಯೋಮ" ಬೆಟ್ಟಗಳ ಮುಂದುವರಿದ ಭಾಗ. ಅಲ್ಲದೆ ಸುಮಾತ್ರದ  ದಕ್ಷಿಣ ಮತ್ತು ಕ್ಕಿರುವ  "ಮೆಂಟವಯ್" ದ್ವೀಪಗಳು, ನಿಕೋಬಾರ್ ದ್ವೀಪಗಳ ಮುಂದುವರಿದ ಭಾಗ.


"ಅಂಡಮಾನ್ ನಿಕೋಬಾರ್" ಕುದುರುಗಡಲು  ಉತ್ತರ, ಮದ್ಯ, ದಕ್ಷಿಣ ಅಂಡಮಾನ್ ದ್ವೀಪಗಳಿಂದ ಕೂಡಿದೆ. ಮದ್ಯ ಮತ್ತು ದಕ್ಷಿಣ ಅಂಡಮಾನ್ ಮದ್ಯ ಇರುವದು ಭಾರತಾಂಗ್  ದ್ವೀಪ.ಮದ್ಯ ಅಂಡಮಾನ್  ದ್ವೀಪದ ಪೂರ್ವಕ್ಕೆ ರಿಚಿ  ದ್ವೀಪಗಳು. ದಕ್ಷಿಣ ಅಂಡಮಾನ್ ನ ದಕ್ಷಿಣ -ಪಶ್ಚಿಮ ಕ್ಕಿರುವುದು "ಲಾಬಿರಿಂತ್" ದ್ವೀಪಗಳು. ಅಂಡಮಾನ್ ನಿಕೋಬಾರ್ ನ 

90% ಅಂದ್ರೆ 6408 sq. Mt ಜಾಗ ದಟ್ಟ ಕಾಡು, ಮೀಸಲಿಟ್ಟ, ರಕ್ಷಿಸಲ್ಪಟ್ಟ ಸದಾ ಹಸಿರಿನ

ನಿತ್ಯಾರಣ್ಯ. 36% ಕಾಡನ್ನ ಕಾಡು ಜನರಿಗೆ ಮೀಸಲಾಗಿ

ಬಿಟ್ಟಿದ್ದಾರೆ. ಈ  ದ್ವೀಪಸಮುದಾಯದಲ್ಲಿ "ನಾರ್ಕೊಂಡಮ್ " ಒಂದು ಜ್ವಾಲಾಮುಖಿ. ಇದು ಸತ್ತ ಜ್ವಾಲಾಮುಖಿ. ಆದರೆ 

"ಬೇರ್ರೆನ್ ಲ್ಯಾನ್ಡ್ " ಎಂಬುದು ಇನ್ನೂ ಜೀವಂತವಿರುವ ಸುಪ್ತ ಜ್ವಾಲಾಮುಖಿ.

ಮುಂದುವರಿಯುವುದು.

ಜಯರಾಮ್.






Comments

Popular posts from this blog

ಅಂಡಮಾನ್ ನಿಕೋಬಾರ್ 2