ಅಂಡಮಾನ್ ನಿಕೋಬಾರ್ 2

2023 ರ ಜನವರಿ 17 ರಂದು 14 ಜನ ಅಂಡಮಾನ್ ಪ್ರವಾಸ ಹೊರಟು, ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದೆವು. 28 ಡಿಗ್ರಿ ಹವಾಮಾನ ಹಿತಕರವಾಗಿತ್ತು. 4 ದಿನ ಹ್ಯಾವ್ಲಾಕ್, ನೀಲ್, ಪೋರ್ಟ್ ಬ್ಲೇರ್ ದ್ವೀಪಗಳನ್ನು ನೋಡಿ ಮರಳಿದೆವು.

ಇಲ್ಲಿ ಕಂಡ ಹಲವು ವೈವಿಧ್ಯಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನ. ಅಲ್ಲಿನ ಜನ ಜೀವನ ಅವಲೋಕಿಸುವ ವಿಚಾರ ಸರಣಿ ಇದು.

ಅಂಡಮಾನ್ ನಿಕೋಬಾರ,  ಸುಮಾರು 40000 ವರ್ಷಗಳ ಹಿಂದಿನ, ಅಂದರೆ ರಾಮಾಯಣ, ವೇದ ಕಾಲಕ್ಕಿಂತ ಹಳೆಯ ಅತಿ ಪುರಾತನ ಜನ, ಜಂತು, ವೃಕ್ಷ ಸಂಪತ್ತು, ಭೂಮಿ ಮೇಲೂ, ಸಮುದ್ರದೊಳಗೆ ಇದ್ದ ಜಲಚರಗಳು, ಕೋರಲ್, ಜಲ ಸಸ್ಯಗಳೂ, ಭೂಮಿ ಮತ್ತು ನೀರಲ್ಲಿ ಬದುಕಬಹುದಾದ ಸಮುದ್ರ ಆಮೆ,  ಶಂಖ, ಕವಡೆ, ಏಡಿ ಮುಂತಾದ ಉಭಯ ಚರ (ಅಂಫಿಬಿಯನ್) ಗಳಿರುವ ಪ್ರತ್ಯಕ್ಷ ತಾಣ. ಕೋರಲ್ಗಳು ಒಂದು ವಿಧದ ನಿರ್ಜೀವಿ, ಸಜೀವ ಅಥವಾ ಜೀವ ತುಂಬಿ ಕೊಳ್ಳುವುದನ್ನು ಕಾಣುವ ಪ್ರಕ್ರಿಯೆ. ಇಲ್ಲಿನ ಜನ ಅನಾಗರಿಕರಂತೆ ಕಂಡರೂ, ಪ್ರಕೃತಿಯನ್ನು ನಮಗಿಂತ ಚೆನ್ನಾಗಿ ಅರಿತವರು. ಇದಕ್ಕೆ ಸಾಕ್ಷಿಗಳು ಅನೇಕ. ಅವರನ್ನು ಅವರಂತೆ ಬಾಳಲು ಬಿಡದೆ, ನಮ್ಮ ನಾಗರೀಕತೆ ಹೇರಿ 1857 ನಮ್ಮ ಸಿಪಾಯಿ ದಂಗೆಯ ಸಮಯದಲ್ಲಿ ಸುಮಾರು 5500 ಸಾವಿರದಷ್ಟು ಇದ್ದ ಆ ಸಮಾಜವನ್ನು ಇಂದು 500 ಕ್ಕೆ ಇಳಿಸಿದ್ದೇವೆ. ಬ್ರಿಟಿಷ್ರು ಅಲ್ಲಿ ಒಂದು ಮಿನಿ ಲಂಡನ್ ಸೃಷ್ಟಿಸಿ, ನಂತರ ಕೈದಿಗಳನ್ನು  ಅಟ್ಟಿ, ಅವರಿಂದ ಬಿಟ್ಟಿ ಕೆಲಸ ಮಾಡಿಸಿಕೊಂಡು, ಸಂಪತ್ತನ್ನು ಕೊಳ್ಳೆ ಹೊಡೆದರು. 1910ರ ಸುಮಾರಿಗೆ ಅಲ್ಲಿ 18000 ವಿದ್ದ ವಲಸೆ ಜನರನ್ನ ಇಂದು 5 ಲಕ್ಷ ಕಾಣುವಂತಾಗಿದೆ. ನಮ್ಮ ಸರ್ಕಾರವೂ ಸಹ ಅದೇ ಕಾಲೋನಿಯಲ್ ಪಾಲಿಸಿ ಮುಂದುವರಿಸಿದ ಪರಿಣಾಮ,  ಪಾಪ ಅಂಡಮಾನ್ ನಿಕೋಬಾರ್ ಜನಸಂಖ್ಯೆ ಮಾತ್ರ ದಿನೇ ದಿನೇ ಕ್ಷೀಣಿಸುತ್ತಿದೆ. ಬರೀ ಜನರೇ ಅಲ್ಲ, ಅಲ್ಲಿನ ಭೂಮಿ ಮೇಲಿನ ಪ್ರಾಣಿ ಪಕ್ಷಿ ಸಂಕುಲ, ಸಮುದ್ರದೊಳಗಿನ ಕೋರಲ್, ಮೀನು ಮತ್ತಿತರ ಜಲಚರಿಗಳು ಅವಸಾನ ಕಂಡಿದೆ. ಇಡೀ ಅಂಡಮಾನ್ ನಿಕೋಬಾರ್ ಎಡಬಿಡಂಗಿಯಾಗಿ ಬದುಕು ಸಾವಿನ ನಡುವೆ, ನ್ಯಾಯಾಲಯದ ಕಟ್ಟೆ ಏರಿ ನ್ಯಾಯ ಅನ್ಯಾಯಗಳ ನಡುವೆ ಹೋರಾಟ ನಡೆಸಿದೆ. ಈ ಮಧ್ಯೆ ಮಿಲಿಟರಿ ಉಪಕರಣಗಳ ಉಡಾವಣೆ, ಅಣುಸ್ತಾವರಗಳ  ಅಗ್ನಿ ಪರೀಕ್ಷೆಗಳನ್ನು ಎದುರಿಸುತ್ತಿದೆ. ಹೀಗಾಗಿ ನಮ್ಮ ಕಣ್ಣೆದುರು ಕಾಣಬಹುದಾದ 40 ಸಾವಿರ ವರ್ಷಗಳ ಹಿಂದಿನ ಸಮಾಜದ, ಪ್ರಕೃತಿ ವೈವಿಧ್ಯ ನಶಿಸಿ, ತನ್ನಿರುವಿಕೆಗೆ ಒದ್ದಾಡುತ್ತಿದೆ. ಇದರ ವಿವರಗಳನ್ನು ಇನ್ನಷ್ಟು

ಕೆದಕೋಣ ಮುಂದಿನ ಸಂಚಿಕೆಯಲ್ಲಿ.

ಜಯರಾಮ್. ಸಕ್ರೆಪಟ್ಣ.

Comments

Popular posts from this blog

ಅಂಡಮಾನ್ ನಿಕೋಬಾರ್ ಪ್ರವಾಸ ಕಥೆ