Posts

ಅಂಡಮಾನ್ ನಿಕೋಬಾರ್ 2

2023 ರ ಜನವರಿ 17 ರಂದು 14 ಜನ ಅಂಡಮಾನ್ ಪ್ರವಾಸ ಹೊರಟು, ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದೆವು. 28 ಡಿಗ್ರಿ ಹವಾಮಾನ ಹಿತಕರವಾಗಿತ್ತು. 4 ದಿನ ಹ್ಯಾವ್ಲಾಕ್, ನೀಲ್, ಪೋರ್ಟ್ ಬ್ಲೇರ್ ದ್ವೀಪಗಳನ್ನು ನೋಡಿ ಮರಳಿದೆವು. ಇಲ್ಲಿ ಕಂಡ ಹಲವು ವೈವಿಧ್ಯಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನ. ಅಲ್ಲಿನ ಜನ ಜೀವನ ಅವಲೋಕಿಸುವ ವಿಚಾರ ಸರಣಿ ಇದು. ಅಂಡಮಾನ್ ನಿಕೋಬಾರ,  ಸುಮಾರು 40000 ವರ್ಷಗಳ ಹಿಂದಿನ, ಅಂದರೆ ರಾಮಾಯಣ, ವೇದ ಕಾಲಕ್ಕಿಂತ ಹಳೆಯ ಅತಿ ಪುರಾತನ ಜನ, ಜಂತು, ವೃಕ್ಷ ಸಂಪತ್ತು, ಭೂಮಿ ಮೇಲೂ, ಸಮುದ್ರದೊಳಗೆ ಇದ್ದ ಜಲಚರಗಳು, ಕೋರಲ್, ಜಲ ಸಸ್ಯಗಳೂ, ಭೂಮಿ ಮತ್ತು ನೀರಲ್ಲಿ ಬದುಕಬಹುದಾದ ಸಮುದ್ರ ಆಮೆ,  ಶಂಖ, ಕವಡೆ, ಏಡಿ ಮುಂತಾದ ಉಭಯ ಚರ (ಅಂಫಿಬಿಯನ್) ಗಳಿರುವ ಪ್ರತ್ಯಕ್ಷ ತಾಣ. ಕೋರಲ್ಗಳು ಒಂದು ವಿಧದ ನಿರ್ಜೀವಿ, ಸಜೀವ ಅಥವಾ ಜೀವ ತುಂಬಿ ಕೊಳ್ಳುವುದನ್ನು ಕಾಣುವ ಪ್ರಕ್ರಿಯೆ. ಇಲ್ಲಿನ ಜನ ಅನಾಗರಿಕರಂತೆ ಕಂಡರೂ, ಪ್ರಕೃತಿಯನ್ನು ನಮಗಿಂತ ಚೆನ್ನಾಗಿ ಅರಿತವರು. ಇದಕ್ಕೆ ಸಾಕ್ಷಿಗಳು ಅನೇಕ. ಅವರನ್ನು ಅವರಂತೆ ಬಾಳಲು ಬಿಡದೆ, ನಮ್ಮ ನಾಗರೀಕತೆ ಹೇರಿ 1857 ನಮ್ಮ ಸಿಪಾಯಿ ದಂಗೆಯ ಸಮಯದಲ್ಲಿ ಸುಮಾರು 5500 ಸಾವಿರದಷ್ಟು ಇದ್ದ ಆ ಸಮಾಜವನ್ನು ಇಂದು 500 ಕ್ಕೆ ಇಳಿಸಿದ್ದೇವೆ. ಬ್ರಿಟಿಷ್ರು ಅಲ್ಲಿ ಒಂದು ಮಿನಿ ಲಂಡನ್ ಸೃಷ್ಟಿಸಿ, ನಂತರ ಕೈದಿಗಳನ್ನು  ಅಟ್ಟಿ, ಅವರಿಂದ ಬಿಟ್ಟಿ ಕೆಲಸ ಮಾಡಿಸಿಕೊಂಡು, ಸಂಪತ...

ಅಂಡಮಾನ್ ನಿಕೋಬಾರ್ ಪ್ರವಾಸ ಕಥೆ

ಅಂಡಮಾನ್ ನಿಕೋಬಾರ್ ಬಂಗಾಳ ಕೊಲ್ಲಿಯಲ್ಲಿರುವ ಈ ಕುದುರುಗಡಲು ಅಥವಾ ದ್ವೀಪಸಮುದಾಯದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳು ಅತಿ ದೊಡ್ಡವು.  306 ದ್ವೀಪಗಳು ಹಾಗೂ 206 ದಡಿಬಂಡೆಗಳನ್ನು ಹೊಂದಿದ್ದು 8200 sq km ವಿಸ್ತರಿಸಿದೆ. ಕೇವಲ 38 ದ್ವೀಪಗಳಲ್ಲಿ ಮಾತ್ರ ಜನರಿದ್ದಾರೆ. ಭಾರತದ ಮುಖ್ಯ ಭೂಮಿಯಿಂದ 1200 ಕಿ ಮೀ ದೂರವಿದೆ. ಆದರೆ ಈ ದ್ವೀಪಸಮುದಾಯದ ಉತ್ತರದಲ್ಲಿರುವ "ಲ್ಯಾಂಡ್ ಫಾಲ್"  ದ್ವೀಪದಿಂದ ಮೈನಮಾರ್ (ಬರ್ಮ ) 280 ಕಿ. ಮೀ. ಹತ್ತಿರ. ಅಲ್ಲದೆ ಈ ದ್ವೀಪಸಮುದಾಯದ   ದಕ್ಷಿಣದ "ಗ್ರೇಟ್ ನಿಕೋಬಾರ್"  ದ್ವೀಪದಿಂದ ಬರೀ 145 ಕಿ. ಮೀ. ಅಷ್ಟೇ. ಅಂಡಮಾನ್ ನಿಕೋಬಾರ ದ್ವೀಪಗಳು ಬರ್ಮ ದ "ಕೇಪ್ ನೆಗ್ರಿಸ್" ನಿಂದ ಸುಮಾತ್ರ (ಇಂಡೋನೇಷ್ಯ) ದ "ಬಂಡ ಆರ್ಚ್" ವರೆಗೆ ಬಿದಿಗೆ ಚಂದ್ರನಂತೆ  ಹಬ್ಬಿರುವ  ಸಮೂಹ ದ್ವೀಪ. ಇವು ಬರ್ಮದ ಮುಳುಗಿರುವ "ಅರ್ಕನ್ ಯೋಮ" ಬೆಟ್ಟಗಳ ಮುಂದುವರಿದ ಭಾಗ. ಅಲ್ಲದೆ ಸುಮಾತ್ರದ  ದಕ್ಷಿಣ ಮತ್ತು ಕ್ಕಿರುವ  "ಮೆಂಟವಯ್" ದ್ವೀಪಗಳು, ನಿಕೋಬಾರ್ ದ್ವೀಪಗಳ ಮುಂದುವರಿದ ಭಾಗ. "ಅಂಡಮಾನ್ ನಿಕೋಬಾರ್" ಕುದುರುಗಡಲು  ಉತ್ತರ, ಮದ್ಯ, ದಕ್ಷಿಣ ಅಂಡಮಾನ್ ದ್ವೀಪಗಳಿಂದ ಕೂಡಿದೆ. ಮದ್ಯ ಮತ್ತು ದಕ್ಷಿಣ ಅಂಡಮಾನ್ ಮದ್ಯ ಇರುವದು ಭಾರತಾಂಗ್  ದ್ವೀಪ.ಮದ್ಯ ಅಂಡಮಾನ್  ದ್ವೀಪದ ಪೂರ್ವಕ್ಕೆ ರಿಚಿ  ದ್ವೀಪಗಳು. ದಕ್ಷಿಣ ಅಂಡಮಾನ್ ನ ದಕ್ಷಿಣ -ಪಶ್ಚ...